ಭಟ್ಕಳದಲ್ಲಿ ಹನುಮಾನ್ ಧ್ವಜ ಹಾರಿಸಿದ್ದಕ್ಕೆ ಸಂಸದ ಅಂತಕುಮಾರ್ ಹೆಗಡೆ ಮೇಲೆ ಕೇಸ್ ದಾಖಲು

ಕಾರವಾರ : ಭಟ್ಕಳದಲ್ಲಿ ಸಾವರ್ಕರ್ ನಾಮಫಲಕ ಮತ್ತು ಹನುಮಾನ್ ಧ್ವಜ ಹಾರಿಸಿದ ಹಿನ್ನೆಲೆ ಸಂಸದ ಅನಂತ್‌ಕುಮಾರ್ ಹೆಗಡೆ ಸೇರಿದಂತೆ ಒಟ್ಟು 21 ಜನರ ಮೇಲೆ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಭಟ್ಕಳದ ತೆಂಗಿನಗುಂಡಿಯ ಬಂದರು ಆವರಣದಲ್ಲಿ ಸಾವರ್ಕರ್ ನಾಮಫಲಕ ಮತ್ತು ಹನುಮಾನ್ ಧ್ವಜವನ್ನು ಸಂಸದ ಅನಂತಕುಮಾರ್ ಹೆಗಡೆ ಮುಂದಾಳತ್ವದಲ್ಲಿ ಸೋಮವಾರ ಹಾರಿಸಲಾಗಿತ್ತು. ಪರವಾನಿಗೆ ಪಡೆಯಲಿಲ್ಲ ಎಂದು ಕಳೆದ ತಿಂಗಳಲ್ಲಿ ಭಗವಾಧ್ವಜ ಹಾಗೂ ನಾಮಫಲಕ ತೆರವುಗೊಳಿದ್ದ ಗ್ರಾಮಪಂಚಾಯತ್ ಅಧಿಕಾರಿಗಳು ಅನುಮತಿ ಪಡೆದು ಹಾಕುವಂತೆ ತಿಳಿಸಿದ್ದರು. ಈ ವಿಷಯ ಸಾಕಷ್ಟು ಚರ್ಚೆಗೆ ಗ್ರಾಸವಾಗಿ ವಿವಾದಕ್ಕೆ ಕಾರಣವಾಗಿತ್ತು. ಆದರೆ ಕಳೆದ ಸೋಮವಾರ ಕಾರ್ಯಕರ್ತರ ಮೂಲಕ ಹನುಮಾನ್ ಧ್ವಜ ಹಾರಿಸಿ, ಸಾವರ್ಕರ್ ನಾಮಫಲಕ ಅಳವಡಿಸಿದ್ದ ಸಂಸದ ಅನಂತ್‌ಕುಮಾರ್ ಹೆಗಡೆ ಏನು ಮಾಡಿಕೊಳ್ಳುತ್ತೀರಿ ಮಾಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಸವಾಲು ಹಾಕಿದ್ದರು.

LEAVE A REPLY

Please enter your comment!
Please enter your name here