ಸಿಇಟಿ ಫಲಿತಾಂಶ ಪ್ರಕಟ

ಬೆಂಗಳೂರು: ಇಂದು 2021-22ನೇ ಸಾಲಿನ ಸಿಇಟಿ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು, ಸಚಿವ ಅಶ್ವತ್ಥ್ ನಾರಾಯಣ ಅವರು ಸಿಇಟಿ ಫಲಿತಾಂಶವನ್ನು ಪ್ರಕಟಿಸಿದ್ದಾರೆ. ಈ ಬಾರಿಯ ಸಿಇಟಿಯಲ್ಲಿ ಯುವಕರು ಮೇಲುಗೈ ಸಾಧಿಸಿದ್ದಾರೆ. ಪ್ರತಿ ವರ್ಷವೂ ವಿದ್ಯಾರ್ಥಿನಿಯರು ಸಿಇಟಿಯಲ್ಲಿ ಮೇಲುಗೈ ಸಾಧಿಸುತ್ತಿದ್ದರು. ಆದರೆ ಈ ವರ್ಷ ಅದು ಬದಲಾಗಿದೆ.
ಇಂಜಿನಿಯರಿಂಗ್ ಕೋರ್ಸ್ಗೆ 1,71,656 ರ್ಯಾಂಕ್ ಬಂದಿದ್ದು, ಯಲಹಂಕ ನ್ಯಾಷನಲ್ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿ ಅಪೂರ್ವ ತಂಡೋನ್ 97% ಪ್ರಥಮ ರ್ಯಾಂಕ್ ಪಡೆದಿದ್ದು, ಮಾರತ್ತಹಳ್ಳಿ ಶ್ರೀ ಚೈತನ್ಯ ಟೆಕ್ನೊ ಸ್ಕೂಲ್ ವಿದ್ಯಾರ್ಥಿ ಸಿದ್ದಾರ್ಥ ಸಿಂಗ್ 96% ದ್ವಿತೀಯ ರ್ಯಾಂಕ್ ಪಡೆದಿದ್ದಾರೆ.
ಕೃಷಿ ಕೋರ್ಸ್ಗೆ 1,39,968 ರ್ಯಾಂಕ್ ಪಡೆದಿದ್ದು, HAL ಪಬ್ಲಿಕ್ ಸ್ಕೂಲ್ನ ಅರ್ಜುನ್, 93%, ಶ್ರೀ ಚೈತನ್ಯ ಟೆಕ್ನೊ ಸ್ಕೂಲ್, ಉಲ್ಲಾಳ ಸುಮೀತ್, 92%, ತುಮಕೂರು ವಿದ್ಯಾನಿಕೇತನ ಪಿಯು ಕಾಲೇಜ್ ಸುದೀಪ್ 92% ಪಡೆದಿದ್ದಾರೆ.
ಪಶುಸಂಗೋಪನೆ 1,42,2820 ರ್ಯಾಂಕ್ ಮಡೆದಿದ್ದು, ನ್ಯಾಷನಲ್ ಸೆಂಟರ್ ಫಾರ್ ಎಕ್ಸ್ಲೆನ್ಸ್, ಬೆಂಗಳೂರು ಹೃಷಿಕೇಶ್, 98%, ಪ್ರಥಮ ರ್ಯಾಂಕ್ ಪಡೆದಿದ್ದು, ಶ್ರೀ ಚೈತನ್ಯ ಟೆಕ್ನೊ ಸ್ಕೂಲ್, ಕೆ.ಆರ್.ಪುರ ಮನೀಶ್, 97%, ದ್ವಿತೀಯ ರ್ಯಾಂಕ್ ಶುಭಾ ಕೌಶಿಕ್, 96%, ತೃತೀಯ ರ್ಯಾಂಕ್ ಪಡೆದಿದ್ದಾರೆ.
ಯೋಗ ಮತ್ತು ನ್ಯಾಚುರೋಪತಿ 1,42,750 ರ್ಯಾಂಕ್ ಬಂದಿದ್ದು, ನ್ಯಾಷನಲ್ ಸೆಂಟರ್ ಫಾರ್ ಎಕ್ಸ್ಲೆನ್ಸ್ ಹೃಷಿಕೇಶ್ 98% ಪ್ರಥಮ ರ್ಯಾಂಕ್ ಪಡೆದರೆ, ಉಡುಪಿಯ ಮಾದವ ಕೃಪ ಇಂಗ್ಲೀಷ್ ಸ್ಕೂಲ್ ವಿದ್ಯಾರ್ಥಿ ವ್ರಜೇಶ್, 96% ದ್ವಿತೀಯ ರ್ಯಾಂಕ್ ಪಡೆದಿದ್ದಾರೆ. ಶ್ರೀ ಚೈತನ್ಯ ಟೆಕ್ನೊ ಸ್ಕೂಲ್ನ ಕೃಷ್ಣ, 96% ತೃತೀಯ ರ್ಯಾಂಕ್ ಪಡೆದುಕೊಂಡಿದ್ದಾರೆ.
ಬಿ.ಫಾರ್ಮ್ ಕೋರ್ಸ್ ಮತ್ತು ಫಾರ್ಮ-ಡಿ ಕೋರ್ಸಿಗೆ 1,74,568 ರ್ಯಾಂಕ್ ಬಂದಿದೆ.

LEAVE A REPLY

Please enter your comment!
Please enter your name here