ನಿಂತು ತಿನ್ನೊದ್ರಿಂದ ದೇಹಕ್ಕೆ ಬರುತ್ತೆ ಕುತ್ತು..!

ಹೌದು.. ಹೀಗಿನ ಸೂಪಾರ್ ಫಾಸ್ಟ್ ಜಗತ್ತಿನಲ್ಲಿ ಜನರಿಗೆ ಊಟ, ತಿಂಡಿ, ನಿದ್ರೆ, ಮಾಡುವುದಕ್ಕೂ ಸಮಯ ಇಲ್ಲದಂತಾಗಿದೆ. ಯಾಕಂದ್ರೆ ಕೆಲಸದ ಒತ್ತಡ ಒಂದು ಕಡೆಯಾದ್ರೆ ಮನೆಯಲ್ಲಿನ ಪರಿಸ್ಥಿತಿಗಳು ಮತ್ತೊಂದು ಕಡೆ. ಕೆಲವರು ಮನೆಯಲ್ಲೇ ಇದ್ದರು ನಿಂತುಕೊಂಡು ಊಟ-ತಿಂಡಿ ಮಾಡುತ್ತಾರೆ,  ಅಂತವರಿಗೆ ಕಾದಿದೆ ಬಿಗ್ ಶಾಕಿಂಗ್..? ಅದೇನು ಅಂತೀರಾ ಹೇಳ್ತಿವಿ ನೋಡಿ.

ನಿಂತು ಕೊಂಡು ತಿಂದರೆ ಅದರಿಂದ ನಮ್ಮ ಆರೋಗ್ಯದ ಮೇಲೆ ಯಾವ ಪರಿಣಾಮಗಳು ಬೀರಬಹುದು ಎಂದು ನಾವು ತಿಳಿದು ಕೊಳ್ಳಬೇಕು. ನೆಲದ ಮೇಲೆ ಕುಳಿತು ಕೊಂಡು, ಕಾಲುಗಳನ್ನು ಮಡಚಿಟ್ಟು ತಟ್ಟೆಯಲ್ಲಿ ಬಡಿಸಿಟ್ಟ ಊಟ ಮಾಡುವ ಸೊಗಸೇ ಬೇರೆ. ಈ ರೀತಿಯಾಗಿ ಊಟ ಮಾಡಿದರೆ ಅದರಿಂದ ಜೀರ್ಣಕ್ರಿಯೆಯು ಸರಾಗವಾಗಿ ಆಗುವುದು ಎಂದು ಆಯುರ್ವೇದ ಹೇಳಿದೆ. ಇನ್ನು ನೀವು ತಿನ್ನುವಂತಹ ಭಂಗಿಯು ನಿಮ್ಮ ಜೀರ್ಣಕ್ರಿಯೆ ಮೇಲೆ ಪರಿಣಾಮ ಬೀರುವುದು. ಕೆಲವೊಂದು ಮಂದಿ ತಾವು ಮಲಗಿಕೊಂಡು ತಿನ್ನುತ್ತೇವೆ ಎಂದು ಹೇಳುತ್ತಾರೆ. ಆದರೆ ಇದರಿಂದ ಆತ್ಮ ತೃಪ್ತಿ ಸಿಗುತ್ತದೆಯೇ ಹೊರತು, ದೇಹಕ್ಕೆ ಲಾಭವಿಲ್ಲ. ಇದರಿಂದ ಅಜೀರ್ಣವಾಗಬಹುದು. ಹಾಗೆ ಹೊಟ್ಟೆ ಉಬ್ಬರ ಮತ್ತು ಕಿರಿಕಿರಿ ಉಂಟಾಗಬಹುದು. ಮಹಿಳೆಯರ ಮೇಲೆ ನಡೆಸಿದಂತಹ ಒಂದು ಅಧ್ಯಯನದ ಪ್ರಕಾರ ಮಲಗಿ ತಿನ್ನುವಂತಹ ಜನರಲ್ಲಿ ಸ್ವಲ್ಪ ಸಮಯದ ಬಳಿಕ ತೊಂದರೆ ಕಂಡು ಬರುವುದು. ಇದರಲ್ಲಿ ಬೇರೆಯವರಿಗೆ ಹೋಲಿಸಿದರೆ ಜೀರ್ಣಕ್ರಿಯೆಯು ತುಂಬಾ ನಿಧಾನವಾಗುವುದು. ತಿಂದ ಕೂಡಲೇ ಎದ್ದು ನಿಂತರೇ ನೆರವಾಗುವುದೇ? : ಮಲಗಿ ಅಥವಾ ಕುಳಿತು ಕೊಂಡು ತಿನ್ನುವುದಕ್ಕೆ ಹೋಲಿಸಿದರೆ, ತಿಂದ ಬಳಿಕ ನಿಲ್ಲುವುದು ಮತ್ತು ನಡೆಯುವುದು ವೇಗದ ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ ಎಂದು ಮತ್ತೊಂದು ಅಧ್ಯಯನವು ಹೇಳಿದೆ. ಅದಾಗ್ಯೂ, ಇದರಲ್ಲಿ ಅತೀ ಕೆಟ್ಟದು ಎಂದರೆ ಅದು ಮಲಗಿಕೊಂಡು ತಿನ್ನುವುದು. ತಿಂದ ಬಳಿಕ ನಡೆಯುವುದರಿಂದ ಸ್ವಲ್ಪ ಮಟ್ಟಿಗೆ ನೆರವಾಗಿದೆ ಮತ್ತು ಇದರಿಂದ ಸುಮಾರು ೫೦ ಕ್ಯಾಲರಿ ದಹಿಸಲು ನೆರವಾಗಿದೆ. ಇದರಿಂದ ಕಾಲ ‍ಕಾಲಕ್ಕೆ ತೂಕ ಇಳಿಸಿಕೊಳ್ಳಲು ನೆರವಾಗಲಿದೆ. ಆದರೆ ಇಲ್ಲಿ ಹೇಗೆ ತಿನ್ನುತ್ತೀರಿ ಎನ್ನುವುದಕ್ಕಿಂತಲೂ ನೀವು ಏನು ತಿನ್ನುತ್ತೀರಿ ಎನ್ನುವುದು ಮುಖ್ಯವಾಗಿರುವುದು. ಇನ್ನು ನಿಂತು ಕೊಂಡು ತಿಂದರೆ ಆಗ ಕ್ಯಾಲರಿ ದಹಿಸಬಹುದು ಎಂದು ಹೆಚ್ಚಿನವರು ಭಾವಿಸಿರಬಹುದು. ಆದರೆ ತೂಕ ಕಳೆದುಕೊಳ್ಳಲು ಇದು ಆರೋಗ್ಯಕಾರಿ ವಿಧಾನವೇ? ಖಂಡಿತವಾಗಿಯೂ ಇದು ಆರೋಗ್ಯಕಾರಿ ವಿಧಾನವಲ್ಲ. ನಿಂತು ಕೊಂಡು ತಿಂದರೆ ಆಗ ತಿನ್ನುವ ವೇಗ ಅಧಿಕವಾಗುವುದು ಮತ್ತು ಸ್ವಲ್ಪ ಹೆಚ್ಚು ಆಹಾರ ಹೊಟ್ಟೆ ಸೇರುವುದು. ನೀವು ನಿಂತು ಕೊಂಡು ಹೆಚ್ಚು ಆಹಾರ ತಿಂದರೆ ಆಗ ಅದಕ್ಕೆ ಯಾವುದೇ ರೀತಿಯಿಂದಲೂ ಪರಿಹಾರ ಸಿಗದು. ಇನ್ನು ತೂಕ ಕಳೆದುಕೊಳ್ಳಲು ನೀವು ನಿಂತು ಕೊಂಡು ತಿನ್ನುವ ವಿಧಾನ ಅನುಸರಿಸಿದರೆ, ಆಗ ಇದರಿಂದ ನಿಮಗೆ ಮತ್ತೆ ಹಸಿವಾಗುತ್ತದೆಯಾ ಎನ್ನುವ ಪ್ರಶ್ನೆ ಬರುವುದು ಸಹಜ. ಊಟದ ಬಳಿಕ ನಡೆದರೆ ಆಗ ಜೀರ್ಣಕ್ರಿಯೆಯು ಹೆಚ್ಚಾಗುವುದು. ಇದರಿಂದ ಹಸಿವಿನ ಭಾವನೆ ಬರುವುದು. ಆದರೆ ನಿಂತು ಕೊಂಡು ತಿಂದರೆ ಆಗ ಹಸಿವಿನ ಭಾವನೆ ಆಗದು. ಇದರಿಂದ ನೀವು ಕುಳಿತುಕೊಂಡು ತಿಂದರೆ ಆಗ ಹಸಿವಿನ ಭಾವನೆ ಆಗುವುದು. ನಿಂತು ಕೊಂಡು ತಿಂದರೆ ಅದರಿಂದ ಕ್ಯಾಲರಿ ದಹಿಸಬಹುದು ಎಂದು ಕೆಲವೊಂದು ಸಂದರ್ಭದಲ್ಲಿ ಸಾಬೀತು ಆಗಿದೆ. ಆದರೆ ನಿಂತು ಕೊಂಡು ತಿನ್ನುವುದು ಧೀರ್ಘಕಾಲಕ್ಕೆ ಒಳ್ಳೆಯ ಅಭ್ಯಾಸವಲ್ಲ. ನಿಂತು ಕೊಂಡು ತಿಂದರೆ ಆಗ ಅತಿಯಾಗಿ ತಿನ್ನಬಹುದು ಮತ್ತು ಹೊಟ್ಟೆ ಉಬ್ಬರ ಬರಬಹುದು. ಕೆಲವೊಂದು ಪ್ರಕರಣದಲ್ಲಿ ಎದೆಯುರಿ ಮತ್ತು ಆಮ್ಲೀಯ ಹಿಮ್ಮುಖ ಹರಿವು ತಗ್ಗಿಸುವುದು. ಆದರೆ ಆಹಾರ ಸೇವಿಸಲು ಇದು ಸರಿಯಾದ ಕ್ರಮವಲ್ಲ.ಇದರಿಂದ ನೆಲದ ಮೇಲೆ ಕುಳಿತು ಕೊಂಡು, ಆರಾಮಾಗಿ ತಿನ್ನಬೇಕು. ಇದರಿಂದ ಮನಸ್ಸಿಗೂ ಖುಷಿ ಸಿಗುವುದು ಮತ್ತು ದೇಹವು ಎಲ್ಲಾ ರೀತಿಯ ಪೋಷಕಾಂಶಗಳನ್ನು ಹೀರಿ ಕೊಳ್ಳಲು ನೆರವಾಗುವುದು. ಇಷ್ಟು ಮಾತ್ರವಲ್ಲದೆ ಜೀರ್ಣಕ್ರಿಯೆಗೂ ಇದು ಸಹಕಾರಿ ಆಗಲಿದೆ.

LEAVE A REPLY

Please enter your comment!
Please enter your name here