ರಾಜ್ಯದಲ್ಲಿ ಮತ್ತೊಂದು ವಿದ್ರಾವಕ ಘಟನೆ : ಮಕ್ಕಳಿಗೆ ವಿಷ ಕುಡಸಿ ತಾಯಿ ಆತ್ಮಹತ್ಯೆ..!

ಗದಗ: ನೆಲಮಂಗಲ ತಾಯಿ ಮಕ್ಕಳ ಆತ್ಮಹತ್ಯೆ ಪ್ರಕರಣ ಮಾಸುವ ಮುನ್ನ ರಾಜ್ಯದಲ್ಲಿ ಮತ್ತೊಂದು ವಿದ್ರಾವಕ ಘಟನೆ ನಡೆದಿದೆ. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ತಾಯಿ, ಮಕ್ಕಳಿಗೆ ವಿಷ ಉಣಿಸಿ, ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಗದಗ ಜಿಲ್ಲೆ ನರಗುಂದ ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ ಘಟನೆ ನಡೆದಿದ್ದು, 27 ವರ್ಷದ ಯಲ್ಲವ್ವ ಚಂದಣ್ಣವರ್ ಆತ್ಮಹತ್ಯೆ ಮಾಡಿಕೊಂಡ ಮಹಿಳೆಯಾಗಿದ್ದಾಳೆ. ತಾಯಿ ನೀಡಿದ ವಿಷದ ಪರಿಣಾಮ 6 ವರ್ಷದ ಮಗು ಸಾವನ್ನಪ್ಪಿದೆ. ಆದರೆ 6 ವರ್ಷದ ಬಾಲಕನ ಸ್ಥಿತಿ ಗಂಭೀರವಾಗಿದ್ದು, ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಮೊದಲು ತಾಯಿ ಕ್ರಿಮಿನಾಶಕ ಸೇವನೆ ಮಾಡಿ ಬಳಿಕ ಮಕ್ಕಳಿಗೆ ಕುಡಿಸಿದ್ದಾರೆ ಎನ್ನಲಾಗಿದೆ. ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here