ಚುನಾವಣೆ ಹೊತ್ತಲ್ಲಿ ಸಿದ್ದು ಸರ್ಕಾರದಿಂದ ಜಾತಿಗಣತಿ ಅಸ್ತ್ರ 

ಬೆಂಗಳೂರು : ಸದಾಶಿವ ಆಯೋಗ ವರದಿ ಜಾರಿಗೆ ರಾಜ್ಯ ಸರ್ಕಾರ ಮಹತ್ವದ ನಿರ್ಣಯ ಕೈಗೊಂಡಿದೆ. ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಹೊಸ ಜನಗಣತಿ ಪ್ರಕಾರ ಮೀಸಲಾತಿ ಪರಿಷ್ಕರಣೆ ಮಾಡಲು ಕೆಂದ್ರಕ್ಕೆ ಶಿಫಾರಸು ಮಾಡಲು ಸಂಪುಟ ಸಭೆ ನಿರ್ಧಾರ ಮಾಡಿದೆ.

ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಸುದೀರ್ಘ ಚರ್ಚೆ ಬಳಿಕ ಸದಾಶಿವ ಆಯೋಗದ ವರದಿ ಜಾರಿಗೆ ತೀರ್ಮಾನ ಕೈಗೊಂಡಿತು. ಹೊಸ ಜನಗಣತಿ ಪ್ರಕಾರ ಮೀಸಲಾತಿ ಪರಿಷ್ಕರಣೆ ಮಾಡಲು ಕೆಂದ್ರಕ್ಕೆ ಶಿಫಾರಸು ಮಾಡಲು ಸಭೆ ನಿರ್ಧರಿಸಿದೆ. ಮೀಸಲಾತಿ ಪರಿಷ್ಕರಣೆ ಮಾಡಲು ಸಂವಿಧಾನಬದ್ಧವಾಗಿ ರಾಜ್ಯಗಳಿಗೆ ಅಧಿಕಾರ ಕೊಡಲು ಕೇಂದ್ರಕ್ಕೆ ಮನವಿ ಮಾಡುವುದಾಗಿ ಸಚಿವ ಸಂಪುಟ ಸಭೆ ಹೇಳಿದೆ.

ಸುಮಾರು 2 ದಶಕದಿಂದ ದಲಿತರ ಒಳಪಂಗಡಗಳಿಗೆ ಅನ್ಯಾಯ ಆಗಿದೆ. ಒಳ ಮೀಸಲಾತಿ ಬೇಕೆಂದು ಕೇಳುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಸದಾಶಿವ ಆಯೋಗ ರಚಿಸಲಾಗಿತ್ತು. ಆಯೋಗದ ವರದಿ ನೀಡಲು ಅಧಿವೇಶನದಲ್ಲಿ ಮಂಡನೆಯಾಗಿಲ್ಲ. ಚುನಾವಣೆ ವೇಳೆ ಪ್ರಣಾಳಿಕೆಯಲ್ಲಿ ಇದನ್ನು ಹಾಕಲಾಗಿತ್ತು. ಹಿಂದಿನ ಬಿಜೆಪಿ ಸರ್ಕಾರದಲ್ಲಿ ತೀರ್ಮಾನ ಮಾಡಿ ಕೇಂದ್ರಕ್ಕೆ ಶಿಫಾರಸು ಮಾಡಿದ್ದರು. ಸದಾಶಿವ ಆಯೋಗದ ಅಪ್ರಸ್ತುತ. ಸದಾಶಿವ ಆಯೋಗ ವರದಿಯನ್ನ ಮುಕ್ತಾಯಗೊಳಿಸಿದ್ದೇವೆ ಅಂತ ಕೇಂದ್ರಕ್ಕೆ ಬಿಜೆಪಿ ವರದಿ ನೀಡಿತ್ತು ಎಂದು ಸಮಾಜಕಲ್ಯಾಣ ಸಚಿವ ಡಾ.ಹೆಚ್.ಸಿ ಮಹದೇವಪ್ಪ ಹೇಳಿದ್ದಾರೆ.

ನಾಗಮೋಹನ್ ದಾಸ್ ವರದಿ ಒಳ ಮೀಸಲಾತಿ ನೀಡಿ ಎಂದು ವರದಿ ನೀಡಿದರು. ಯುಪಿಎ ಸರ್ಕಾರ ಒಳ ಮೀಸಲಾತಿ ನೀಡಲು ಒಂದು ಕಮಿಟಿ ಮಾಡಿತ್ತು. ಆರ್ಟಿಕಲ್ 341 (3) ತಿದ್ದುಪಡಿ ಮಾಡದೇ ಒಳ ಮೀಸಲಾತಿ ನೀಡಲು ಸಾಧ್ಯವಿಲ್ಲ. ಇದಕ್ಕೆ ಪಾರ್ಲಿಮೆಂಟ್ಗೆ ಮಾತ್ರ ಅವಕಾಶವಿದೆ. ರಾಜ್ಯ ಸರ್ಕಾರಕ್ಕೆ ಇದನ್ನು ಮಾಡಲು ಸಾಧ್ಯವೇ ಇಲ್ಲ. ಕಾನೂನು ತಜ್ಞರ ಜೊತೆ ಚರ್ಚೆ ಮಾಡಿ ತೀರ್ಮಾನಕ್ಕೆ ಬಂದಿದ್ದೇವೆ. 101 ಜಾತಿಗಳ ಹಿತ ಕಾಪಾಡಲು 341(3) ತಿದ್ದುಪಡಿಗಾಗಿ ಕೇಂದ್ರಕ್ಕೆ ವರದಿ ಕಳಿಸಲು ನಿರ್ಧಾರ ಮಾಡಿದ್ದೇವೆ ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here