ಮುಖದ ಅಂದವನ್ನು ಮತ್ತಷ್ಟು ಹೆಚ್ಚಿಸುವ ಮೂಗುತಿ…!

ಮೂಗುತಿ ಅಂದ್ರೆ ಎಲ್ಲಾ ಹೆಂಗಳಿಯರಿಗೂ ಅಚ್ಚು ಮೆಚ್ಚು… ಮೂಗುತಿಗೆ ಹೆಣ್ಣಿನ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುವ ಸಾಮಾರ್ಥ್ಯ ಇದೆ. ಹಿಂದಿನ ಕಾಲದಲ್ಲಿ ಮಹಿಳೆಯರು ಮೂಗುತಿಯನ್ನು ಹೆಚ್ಚಾಗಿ ಬಳಸುತ್ತಿದ್ದರು..ಮೂಗಿಗಿಂತ ಅವರು ಧರಿಸುತ್ತಿದ್ದ ಮೂಗುತಿಯ ಗಾತ್ರವೇ ದೊಡ್ಡದಾಗಿರುತ್ತಿತ್ತು. ಆದ್ರೆ ದಿನ ಕಳೆದಂತೆ ದೊಡ್ಡ ಮೂಗುತಿಯ ಫ್ಯಾಷನ್ ಹೋಗಿ ಚಿಕ್ಕ ಮೂಗುತಿಯ ಫ್ಯಾಷನ್  ಶುರುವಾಯಿತು. ಟ್ರೆಂಡ್ ಹೇಗೆ ಬದಲಾಗುತ್ತೊ ಹಾಗೇ ಜನ್ರು ಈಗೀನ ಟ್ರೇಂಡ್ ಗೆ  ಬದಲಾಗೊದು ವಾಡಿಕೆ. ಆದ್ರೆ ಈಗ ಮತ್ತೇ ಹಳೆಯ ದೊಡ್ಡ ದೊಡ್ಡ ಮೂಗುತಿಗಳೇ ಮತ್ತೇ ಟ್ರೇಂಡ್ ಆಗ್ತಾಯಿದೆ. ಹಿಂದೂ ಸಂಪ್ರದಾಯದಲ್ಲಿ ಮೂಗುತಿಗೆ ವಿಶೇಷ ಮಹತ್ವ ಇದೆ. ಸ್ತೀಯರು ಮಾತ್ರ ಮೂಗುತಿ ಹಾಕಬೇಕು ಅನ್ನುವುದರ ಹಿಂದೆಯೂ ಶಾಸ್ತ್ರವಿದೆಯಂತೆ.

ಸ್ತ್ರೀಯರ ಮನಸ್ಸು ಚಂಚಲವಾಗಿರುತ್ತದೆ ಮೂಗುತಿ ಧರಿಸುವುದರಿಂದ ಮನಸ್ಸು ಸ್ಥೀರವಾಗಿರುತ್ತದೆ ಎಂಬುದು ಬಹಳ ಜನಗಳ ನಂಬಿಕೆ, ಹೆಣ್ಣು ಮಕ್ಕಳ ಕೋಪ, ಹಠ, ಚಂಚಲತೆಯನ್ನು ನಿಗ್ರಹಿಸುವ ಶಕ್ತಿಯು ಕೂಡ ಮೂಗುತಿಗೆ ಇದೆಯಂತೆ. ಇಷ್ಟು ದಿನ ಮೂಗುತಿ ಅಂದ್ರೆ ಮೂಗು ಮುರಿಯುತ್ತಿದ್ದ ಹೆಣ್ಣು ಮಕ್ಕಳು ಈಗ ಮೂಗುತಿ ಹಾಕೊದನ್ನೇ ಫ್ಯಾಷನ್  ಮಾಡಿಕೊಂಡಿದ್ದಾರೆ.ಮದುವೆ ಸಮಾರಂಭಗಳಲ್ಲಿ ದೊಡ್ಡದಾದ ವೃತ್ತಾಕಾರ ದಮೂಗುತಿಯನ್ನು ವಧುವಿಗೆ ರಿಸಲಾಗುತ್ತದೆ. ಇದು ವಧುವಿನ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಭಾರತೀಯ ಹೆಂಗಳೆಯರು ಅವರವರ ಆಚರಣೆಗಳಿಗೆ ತಕ್ಕಂತೆ ಅವರವರ ಇಚ್ಛೆಯ ಪ್ರಕಾರವಾಗಿ ಮೂಗುತ್ತಿಯನ್ನು ಧರಿಸುತ್ತಾರೆ. ಮೂಗಿಗೆ ಧರಿಸುವ ಈ ವಿಶೇಷ ಮೂಗುತಿ ಮಹಿಳೆಯರ ಶ್ವಾಸ ಮಾರ್ಗವನ್ನು ರಕ್ಷಿಸುತ್ತದೆ. ಮೂಗುತಿಯಲ್ಲಿರುವ ಸಾತ್ತ್ವಿಕತೆ ಮತ್ತು ಚೈತನ್ಯದಿಂದ ಮೂಗಿನ ಚೈತನ್ಯದ ವಲಯವು ನಿರ್ಮಾಣವಾಗುತ್ತದೆ. ಮೂಗಿನ ಸುತ್ತಲಿನ ವಾಯುಮಂಡಲವೂ ಶುದ್ಧವಾಗುತ್ತದೆ. ಇದರಿಂದ ಶ್ವಾಸ ಮಾರ್ಗದಿಂದ ಶುದ್ಧ ಗಾಳಿಯು ದೇಹ ಪ್ರವೇಶಿಸಲು ಸುಲಭವಾಗುತ್ತದೆ. ಮಹಿಳೆಯರ ಗರ್ಭಕೋಶ ಮತ್ತಿತರ ಜನನಾಗಂಗಳಿಗೆ ಸಂಬಂಧಿಸಿದ ನರವು ಮೂಗಿನ ಎಡಭಾಗದೊಂದಿಗೆ ಸಂಬಂಧ ಹೊಂದಿರುತ್ತದೆ. ಇದೇ ಕಾರಣದಿಂದಾಗಿ ಮೂಗುತಿಯನ್ನು ಎಡಭಾಗಕ್ಕೆ ಹಾಕಿಕೊಳ್ಳುತ್ತಾರೆ. ಜೊತೆಗೆ ಇದು ಮಹಿಳೆಯರ ಹೆರಿಗೆ ಸಮಯದಲ್ಲಿ ಅವರ ನೋವನ್ನು ಕಡಿಮೆ ಮಾಡಲು ಕೂಡ ತುಂಬಾ ಸಹಾಯ ಮಾಡುತ್ತದೆ. ಹೀಗಾಗಿ ಮಹಿಳೆಯರಿಗೆ ಮೂಗುತಿ ಅವರ ಅಂದದ ಜೊತೆಗೆ ಆರೋಗ್ಯವನ್ನು ಹೆಚ್ಚಿಸುತ್ತದೆ. ಮೂಗುತಿ ಎಂದಾಕ್ಷಣ ಮೂಗು ಮುರಿಯುವ ಮಹಿಳೆಯರು ಈಗಲೇ ಮೂಗುತಿ ಧರಿಸಿ.

 

LEAVE A REPLY

Please enter your comment!
Please enter your name here