ಭಯೋತ್ಪಾದಕರನ್ನು ತೊಡೆದುಹಾಕಬೇಕು, ಜನರ ಹೃದಯ ಗೆಲ್ಲಬೇಕು – ರಾಜನಾಥ್ ಸಿಂಗ್

ರಾಜೌರಿ : ಇತ್ತೀಚೆಗೆ ಎರಡು ಸೈನ್ಯ ವಾಹನವನ್ನು ಗುರಿಯಾಗಿಸಿ ನಡೆಸಿದ ದಾಳಿಯಲ್ಲಿ ನಾಲ್ವರು ಭಾರತೀಯ ಸೈನಿಕರು ಹುತ್ಮಾತರಾಗಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಅಲ್ಲಿ ನಾಗರಿಕರನ್ನು ಸೇನೆ ವಿಚಾರಣೆಗಾಗಿ ಬಂಧಿಸಿದ್ದಾರೆ. ಭಾರತೀಯ ನಾಗರಿಕರನ್ನು ಯಾವುದೇ ಕಾರಣಕ್ಕೂ ನೋಯಿಸಬೇಡಿ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ನಾಲ್ಕು ಸೈನಿಕರ ಸಾವಿನ ನಂತರ ತನಿಖೆಗಾಗಿ ರಾಜೌರಿಯ ನಾಗರಿಕರನ್ನು ಬಂಧಿಸಲಾಗಿದೆ. ಇದರಲ್ಲಿ ಮೂವರು ನಾಗರಿಕರು ಶವವಾಗಿ ಪತ್ತೆಯಾಗಿದ್ದಾರೆ ಎಂದು ಹೇಳಲಾಗಿದೆ. ಈ ಬಗ್ಗೆ ಸೇನೆ ತನಿಖೆಯನ್ನು ನಡೆಸುತ್ತಿದೆ. ಇನ್ನು ಈ ಬಗ್ಗೆ ಮಾತನಾಡಿದ ರಾಜನಾಥ್ ಸಿಂಗ್ ಅಮಾಯಕ ನಾಗರಿಕರ ಮೇಲಿನ ಹಿಂಸಾಚಾರವನ್ನು ಸಹಿಸುವುದಿಲ್ಲ. ನೀವು ದೇಶದ ರಕ್ಷಕರು. ಆದರೆ ದೇಶದ ಭದ್ರತೆ ಮಾಡುವುದರ ಜತೆಗೆ ಇಲ್ಲಿನ ಜನರ ಹೃದಯವನ್ನು ಗೆಲ್ಲುವ ಜವಾಬ್ದಾರಿಯೂ ನಿಮ್ಮ ಮೇಲಿದೆ. ಭಾರತೀಯನನ್ನು ನೋಯಿಸುವ ಯಾವುದೇ ತಪ್ಪು ಮಾಡಬೇಡಿ ಎಂದು ಹೇಳಿದ್ದಾರೆ.
ಸೇನೆ ಇಲ್ಲಿನ ಜನರ ಜತೆಗೆ ನಿಕಟವಾದ ಸಂಬಂಧವನ್ನು ಹೊಂದಬೇಕು. ನಾವು ಯುದ್ಧಗಳನ್ನು ಗೆಲ್ಲಬೇಕು, ಭಯೋತ್ಪಾದಕರನ್ನು ತೊಡೆದುಹಾಕಬೇಕು, ಆದರೆ ಜನರ ಹೃದಯವನ್ನು ಗೆಲ್ಲುವುದು ಪ್ರಮುಖವಾಗಿದೆ. ಆದರೆ ನಾವು ಜನರ ಹೃದಯಗಳನ್ನು ಸಹ ಗೆಲ್ಲಬೇಕು. ಮತ್ತು ಇದನ್ನು ಮಾಡಲು ನೀವು ನಿಮ್ಮ ಕೈಲಾದಷ್ಟು ಪ್ರಯತ್ನಿಸುತ್ತೀರಿ ಎಂಬ ನಂಬಿಕೆ ಇದೆ ಎಂದು ಹೇಳಿದ್ದಾರೆ.
ಪ್ರತಿಯೊಬ್ಬ ಸೈನಿಕನು ಭಾರತ ನಾಗರಿಕರಿಗೆ ಕುಟುಂಬ ಸದಸ್ಯನಂತೆ. ಅವರು ನಿಮ್ಮ ಮೇಲೆ (ಸೈನಿಕರ) ನಂಬಿಕೆಯನ್ನು ಇಟ್ಟುಕೊಂಡಿದ್ದಾರೆ. ಪ್ರತಿಯೊಬ್ಬ ಭಾರತೀಯನು ಈ ಬಗ್ಗೆ ಯೋಚನೆ ಮಾಡುತ್ತಾಳೆ. ನಿಮ್ಮನ್ನು ವಿರೋಧಿಸುವವರನ್ನು ನಾವು ಎಂದು ಸಹಿಸುವುದಿಲ್ಲ. ಇನ್ನು ಇಂತಹ ದಾಳಿಗಳಲ್ಲಿ ಭದ್ರತೆ ಮತ್ತು ಗುಪ್ತಚರ ಸಂಸ್ಥೆಗಳು ನಿರ್ಣಾಯಕ ಪಾತ್ರ ವಹಿಸುತ್ತವೆ. ಪ್ರತಿದಿನವು ನಿಮ್ಮ ಸೇವೆಗೆ ಮತ್ತು ರಕ್ಷಣೆಗೆ ನಾವು ಸಿದ್ದ ಎಂದು ಹೇಳಿದ್ದಾರೆ.
ನೀವು ಇಲ್ಲಿ ಜಾಗರೂಕರಾಗಿದ್ದೀರಿ ಎಂದು ಭಾವಿಸುತ್ತೇನೆ. ಅದರೂ ಹೆಚ್ಚು ಎಚ್ಚರಿಕೆಯಿಂದ ಇರಬೇಕು ನೀವು. ಇಲ್ಲಿಯವರೆಗೆ ನೀವು ಮಾಡಿ ಎಲ್ಲ ಕೆಲಸಕ್ಕೂ ನಾವು ಬೆಂಬಲವಾಗಿ ನಿಂತಿದ್ದೇವೆ. ಮುಂದೆಯೂ ನಿಲ್ಲುತ್ತೇವೆ. ನಿಮ್ಮ ಶೌರ್ಯ ನಮಗೆ ಗೌರವ ತಂದಿದೆ ಎಂದು ಹೇಳಿದರು. ಭಾರತೀಯ ಸೇನೆಯೂ ಮೊದಲಿಗಿಂತ ಹೆಚ್ಚು ಬಲಶಾಲಿಯಾಗಿದೆ ಮತ್ತು ಸುಸಜ್ಜಿತವಾಗಿದೆ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.

LEAVE A REPLY

Please enter your comment!
Please enter your name here